ಚಿತ್ರ: ಎಕ್ಸ್‌ಕ್ಯೂಸ್ ಮಿ

ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್
ಸಂಗೀತ: ಆರ್. ಪಿ.ಪಟ್ನಾಯಕ್
ಗಾಯನ: ಪ್ರೇಮ್, ಆರ್.ವಿ.ಪಟ್ನಾಯಕ್

|ಸಂಗಡಿಗರು|
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ 
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ

ಬಾಳಿಗೆ ಒಂದೆ ಮನೆ.. ಬಾಳೆಗೆ ಒಂದೆ ಗೊನೆ.. ಭುಮಿಗೆ ದೈವ ಒಂದೇನೆ ತಾಯಿ!
ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇನೆ ತಾಯಿ!

|ಸಂಗಡಿಗರು|
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ 
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ

ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೆ ಮೂಲ ಸಿಗದೈಯ್ಯ

ದಡವಿರದ ಕರುಣೆ ಕಡಲಿವಳು.. ಗುಡಿ ಇರದ ದೇವೆ ಇವಳೈಯ್ಯ

ಮನಸು ಮಗುತರ ಪ್ರೀತಿಯಲೀ.. ಅರಸೋ ಅಸುತರಾ ತ್ಯಾಗದಲಿ
ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ

|ಸಂಗಡಿಗರು|
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ 
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ

ಪದಗಳಿಗೆ ಸಿಗದ ಗುಣದವಳು.. ಬರೆಯುವುದು ಹೇಗೆ ಇತಿಹಾಸ?
ಬದುಕುವುದಾ ಕಲಿಸೊ ಗುರು ಇವಳು... ನರಳುವಳೊ ಹೇಗೆ ನವ ಮಾಸ?
ಗಂಗೆ ತುಂಗೆಗಿಂತ ಪಾವನಳು ಬೀಸೊ ಗಾಳಿಗಿಂತ ತಂಪಿವಳು
ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ

|ಸಂಗಡಿಗರು|
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ 

ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ

ಬಾಳಿಗೆ ಒಂದೆ ಮನೆ.. ಬಾಲೆಗೆ ಒಂದೆ ಗೊನೆ.. ಭುಮಿಗೆ ದೈವ ಒಂದೇನೆ ತಾಯಿ!
ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇನೆ ತಾಯಿ!

|ಸಂಗಡಿಗರು|
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ 
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ

Category: ಕನ್ನಡ ಚಿತ್ರಸಾಹಿತ್ಯ
Category: ಎಕ್ಸ್‌ಕ್ಯೂಸ್ ಮಿ ಚಿತ್ರ
Category: ವಿ.ನಾಗೆಂದ್ರ ಪ್ರಸಾದ್ ಸಾಹಿತ್ಯ
ವರ್ಗ: ಪ್ರೇಮ್ ಗಾಯನ
ವರ್ಗ: ಆರ್.ಪಿ.ಪಟ್ನಾಯಕ್ ಗಾಯನ